ಇಂಡಿಯನ್ ನ್ಯಾಷನಲ್ ಕಮಿಟಿ ಆನ್ ಸ್ಪೇಸ್ ರಿಸರ್ಚ್-
ಬಾಹ್ಯಾಂತರಿಕ್ಷದ ಅಧ್ಯಯನ, ಸಂಶೋಧನೆಗಳಿಂದ ದೊರೆವ ಮಾಹಿತಿಗಳನ್ನು ಶಾಂತಿಯುತ ಕಾರ್ಯಗಳಿಗಾಗಿ ಬಳಸಿಕೊಳ್ಳಲು ಯೋಜನೆಗಳನ್ನು ರಚಿಸಿ ಕಾರ್ಯಗತ ಮಾಡಲೋಸುಗ ಈ ರಾಷ್ಟ್ರೀಯ ಮಂಡಲಿಯನ್ನು (ಇನ್‍ಕೊಸ್ಟಾರ್) ರಚಿಸಲಾಯಿತು (1962). ಇದು ಭಾರತ ಸರ್ಕಾರದ ಪರಮಾಣುಶಕ್ತಿ ವಿಭಾಗಕ್ಕೆ ಸಲಹೆಗಳನ್ನೀಯುತ್ತದೆ. ಕೇರಳ ರಾಜ್ಯದ ತುಂಬಾದಲ್ಲಿ ರಾಕೆಟ್ ಉಡಾವಣಾ ಕೇಂದ್ರದ ಸ್ಥಾಪನೆಯಾದದ್ದು ಇನ್‍ಕೊಸ್ಟಾರ್ ಸಲಹೆ ಮೇರೆಗೆ. ಇಲ್ಲಿ 1963ರಿಂದಲೂ ಅನೇಕ ಪರೀಕ್ಷಕ ರಾಕೆಟ್ಟುಗಳನ್ನು ಹಾರಿಸಲಾಗಿದೆ. ಇಂಥ ಉಡಾವಣೆಗಳಿಂದ ಕಾಂತೀಯ ಸಮಭಾಜಕ ಪ್ರದೇಶದಲ್ಲಿನ (ಮ್ಯಾಗ್ನೆಟಿಕ್ ಈಕ್ವೆಟೋರಿಯಲ್ ರೀಜನ್) ವೈe್ಞÁನಿಕ ಸಂಶೂೀಧನೆಗೆ ಅವಕಾಶವೊದಗಿಸಿದೆ. ಪರೀಕ್ಷಕ ರಾಕೆಟ್ಟುಗಳನ್ನು ಸಂಪೂರ್ಣವಾಗಿ ಭಾರತದಲ್ಲೇ ರಚಿಸುವ ಯೋಜನೆಗಳನ್ನು ಈ ಮಂಡಲಿ ರೂಪಿಸಿದೆ. ತುಂಬಾ ಬಳಿಯಲ್ಲಿಯೇ ವೇಲಿಮಲೈ ಎಂಬಲ್ಲಿ ಅಂತರಿಕ್ಷ ವಿe್ಞÁನ ಮತ್ತು ತಂತ್ರಶಾಸ್ತ್ರದ ಕೇಂದ್ರವೊಂದು ಕೆಲಸ ಮಾಡುತ್ತಿದೆ. ಇದನ್ನು ಸ್ಥಾಪಿಸಿದ್ದು ಈ ಮಂಡಲಿಯೇ. ಉತ್ಕøಷ್ಟ ಕಾರ್ಯನಿರ್ವಹಣೆಯ ಪರೀಕ್ಷಕ ರಾಕೆಟ್ಟುಗಳನ್ನು ರಚಿಸುವುದು, ವಾಯುಯಾನ ತಂತ್ರಶಾಸ್ತ್ರ (ಏರೋಸ್ಟೇಸ್ ಎಂಜಿನಿಯರಿಂಗ್) ಮತ್ತು ನೆಲದ ಮೇಲೆ ನಡೆಸುವ ಪರೀಕ್ಷಾಪ್ರಯೋಗಗಳು ಮತ್ತು ಪಾವತಿ ಹೊರೆಗಳ (ಪೇ ಲೋಡ್ಸ್) ತಯಾರಿಕೆ-ಈ ಮುಂತಾದ ವಿಚಾರಗಳ ಬಗ್ಗೆ ತಜ್ಞ ಸಲಹೆಗಳನ್ನು ನೀಡುವುದು ಈ ಕೇಂದ್ರದ ಮುಖ್ಯ ಹೊಣೆಗಾರಿಕೆ. ಅಹಮದಾಬಾದಿನಲ್ಲಿ ಒಂದು ಪರೀಕ್ಷಕ ಸಂಪರ್ಕಸಾಧನೋಪಗ್ರಹ ಕೇಂದ್ರವನ್ನು ಸ್ಥಾಪಿಸಲಾಗಿದೆ (1967). ಭಾರತ ಮತ್ತು ಅಭಿವೃದ್ದಿ ಹೊಂದುತ್ತಿರುವ ಇತರ ದೇಶಗಳ ವಿe್ಞÁನಿಗಳು ಮತ್ತು ತಂತ್ರಜ್ಞರಿಗೆ ಅಂತರಿಕ್ಷ ಸಮರ್ಪಕ ಸಾಧನೋಪಗ್ರಹಗಳ ತಂತ್ರಶಾಸ್ತ್ರದಲ್ಲಿ ಶಿಕ್ಷಣ ನೀಡುವುದು ಈ ಕೇಂದ್ರದ ಮುಖ್ಯ ಉದ್ದೇಶ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ